Saturday, August 14, 2010

ಒಂದಿಷ್ಟು ಸಾಲುಗಳು .......


ಮನದ ಭಾವನಾ ಲಹರಿಯನ್ನು ಉದ್ದುದ್ದಕ್ಕೆ ಹರಿಯಬಿಡದೆ ಶಬ್ದಗಳ ಚೌಕಟ್ಟಿನಲ್ಲಿ ಬಂಧಿಸುವ ಒಂದು ಪುಟ್ಟ ಪ್ರಯತ್ನ. ಒಂದು ದೊಡ್ಡ ಕಥೆ ಹೇಳುವ ಭಾವವನ್ನು ಕವನಗಳಲ್ಲದ ಈ ಸಾಲುಗಳು ಹೇಳಿಬಿಡುತ್ತವೆ. ಹನಿಗವನ ಎಂದು ಕರೆಯಲೋ ಬೇಡವೋ ಎನ್ನುವ ಅನುಮಾನ ಬೇರೆ. ನಿಮ್ಮ ಸಲಹೆಗಳ ನಿರೀಕ್ಷೆಯಲಿ ...


೧. ಅನುದಿನವೂ
ರವಿಯ ಸ್ವಾಗತಕ್ಕೆ
ನಿಸರ್ಗದ ರಂಗೋಲಿ
ಬಾಂದಳದ ತಾರೆಗಳು .!


೨.ಬಾನ ತಾರೆಗಳಿಗೆ
ದಾರಿ ತೋರಲು
ಮಿನುಗುವ ಮಿಂಚು ಹುಳುಗಳು.. !

೩.ಅನುದಿನವೂ
ನಿರೀಕ್ಷೆಯ ಹೊಸ್ತಿಲಲ್ಲೇ
ಏಳುವ ಬದುಕು ...!

೪. ಪ್ರೀತಿ ಒಸರಿ
ಹಸಿಯಾದ ಮನದಲಿ
ಸದ್ದಿಲ್ಲದೆ ಮೂಡುವ ..
ಯಾರದೋ ಹೆಜ್ಜೆ ಗುರುತುಗಳು ..!

೫. ಪಡುವಣದಿ ಇಳಿಯುವ
ರವಿಯ ಕಂಡಾಗ
ನೆನಪಾಗುವವಳು
ಹುಸಿಮುನಿಸು ತೋರಿಸಿ
ದೂರ ಓಡುವ ನನ್ನ ಹುಡುಗಿ ..!


೬. ಮನದ ಬಾಂದಳದಲ್ಲಿ
ಕನಸುಗಳು ಚಂದಿರ
ನೆನಪುಗಳು ತಾರೆಗಳು
ಮನದಂಚಲಿ ಬದಲಾಗುವ ಭಾವಗಳು
ಬೆಳ್ಳಿ ಮೋಡಗಳು ..!

೭.ಪ್ರೀತಿಯು ಗಂಗೆಯಂತೆ
ನಿರಂತರವಾಗಿ ಹರಿಯುತ್ತದೆ
ಎಲ್ಲ ಕಲ್ಮಶಗಳ ಜೊತೆಗೆ ...!


೮.ಮರೆತು ಹೋಗುವ
ಹಾಡಿನ ಸಾಲುಗಳ ಅಕ್ಷರಗಳು ನೀನು..!


೯.ನಿನ್ನ ನಗುವಿಗೆ
ಉತ್ತರವ ಹುಡುಕುತ್ತಿದ್ದ ನನಗೆ
ನನ್ನ ನಗುವೇ ಮರೆತುಹೋಯಿತು..!


೧೦.ನಿನ್ನೆಲ್ಲ ಪ್ರಶ್ನೆಗಳಿಗೆ
ನನ್ನೆಲ್ಲ ಪ್ರಶ್ನೆಗಳಿಗೆ
ಉತ್ತರ ..............
ನಾನು-ನೀನು....!

15 comments:

  1. ಸೌಮ್ಯ,
    ಮನದ ಬಾಂದಳದಲ್ಲಿ
    ಕನಸುಗಳು ಚಂದಿರ
    ನೆನಪುಗಳು ತಾರೆಗಳು
    ಮನದಂಚಲಿ ಬದಲಾಗುವ ಭಾವಗಳು
    ಬೆಳ್ಳಿ ಮೋಡಗಳು ..!

    ಈ ಸಾಲುಗಳು ಸೂಪರ್.... ಉಳಿದವೂ ಚೆನ್ನಾಗಿವೆ....

    ReplyDelete
  2. ಈ ಸಾಲುಗಳು ತುಂಬಾ ಇಷ್ಟವಾದವು..
    "ಪಡುವಣದಿ ಇಳಿಯುವ
    ರವಿಯ ಕಂಡಾಗ
    ನೆನಪಾಗುವವಳು
    ಹುಸಿಮುನಿಸು ತೋರಿಸಿ
    ದೂರ ಓಡುವ ನನ್ನ ಹುಡುಗಿ ..!
    "

    ReplyDelete
  3. Hanigavanagalu Chennagive...
    ಪ್ರೀತಿ ಒಸರಿ
    ಹಸಿಯಾದ ಮನದಲಿ
    ಸದ್ದಿಲ್ಲದೆ ಮೂಡುವ ..
    ಯಾರದೋ ಹೆಜ್ಜೆ ಗುರುತುಗಳು ..!
    idu tumba ishtavaayitu.

    ReplyDelete
  4. ತುಂಬಾ ಮುದ್ದಾದ ಚುಟುಕುಗಳು. ಅದರಲ್ಲೂ ೩,೪,೬ ಮತ್ತು ೧೦ ತುಂಬಾ ಇಷ್ಟವಾಯಿತು.

    ReplyDelete
  5. ಎಲ್ಲ ಸಾಲುಗಳು ಚೆನ್ನಾಗಿವೆ :-)

    ReplyDelete
  6. wooow,, Soumya..sooooper..:)

    Thanx 4 visiting and following my blog..

    ReplyDelete
  7. ಪ್ರೀತಿ ಒಸರಿ
    ಹಸಿಯಾದ ಮನದಲಿ
    ಸದ್ದಿಲ್ಲದೆ ಮೂಡುವ ..
    ಯಾರದೋ ಹೆಜ್ಜೆ ಗುರುತುಗಳು .....tumba chennagide...

    ReplyDelete
  8. Wow. That was really nice :)
    I didn't even know blogs in kannada even existed.
    I'm so glad I stumbled across yours.
    Now, I can browse other kannada blogs.
    You are very talented.
    If my mom reads your posts, she will love it.
    Great job :)
    I especially liked 2,6,9,10

    ReplyDelete
  9. Good one Soumya.. Ella hanigaloo super...

    ReplyDelete
  10. thank u..... dinakar,jyoti, seetaram sir,nagaraj, chetanakka

    ReplyDelete
  11. @girish many kannada blogars are there .. u can enjoy the reading.. few r really nice

    ReplyDelete
  12. tumbaa sundaravaada padagalinda alankaara maadida kavite. tumbaa chennaagide. kavitegalu haage nirantaravaagi haridu baruttirali.nimage thanks.

    ReplyDelete
  13. nimma ella kavanagalu nanu tappade odutene

    ReplyDelete