Wednesday, January 27, 2010

ಹೀಗೊಂದು ಹುಚ್ಚು ...


ಅದೊಂದು ಶನಿವಾರ. whistel ಹಾಕುತ್ತ hostelನ ನಮ್ಮ floorಗೆ entry ಕೊಟ್ಟ ನನ್ನನ್ನು ಗೆಳತಿಯರೆಲ್ಲ ."ಏನ್ ಹುಡುಗೀ ಶಾಹಿದ್ ಕಪೂರ್ ಬಂದು propose ಮಾಡಿದ್ನಾ ?" ಅಂತ ಚುಡಾಯಿಸೋಕೆ ಶುರುಮಾಡಿದರು. ಯಾವುದೇ ಹುಡುಗನ ಜೊತೆ tease ಮಾಡಿದ್ರೂ "ಅವನ(ಆ ಹುಡುಗನ ) ಜೊತೆ ಶಾಹಿದ್ ಕಪೂರನ free ಆಗಿ ಕೊಟ್ರೂ ಆ ಹುಡುಗ ಬೇಡ ." ಅನ್ನೋದು ನನ್ನ ಮಾಮೂಲು ಡೈಲಾಗ್ ಆಗಿತ್ತು . ಆದರೆ ಆ ದಿನ ಮಾತ್ರ ನಗುತ್ತ ಕಣ್ಣು ಹೊಡೆದು ರೂಮಿನೊಳಗೆ ಸೇರಿಬಿಟ್ಟಿದ್ದೆ. ಬಾಗಿಲ 'ಕೊಂಯ್ ' ರಾಗಕ್ಕೆ ಹುಡುಗಿಯರ ಹಿಮ್ಮೇಳ "ಹೋ" ಸೇರಿಕೊಂಡಿತ್ತು.
ಶುಕ್ರವಾರ ಸಂಜೆ ಕಾಲೇಜು ಬಸ್ಸಿನ ಹಿಂದಿನ ಸೀಟಿನಲ್ಲಿ ಹುಡುಗಿಯರ ನಗು, ಗಾಸಿಪ್ ಮಧ್ಯೆ ಕಳೆದು ಹೋಗಿದ್ದ ನಾನು, ಥಟ್ಟನೆ ಏನೋ ಹೊಳೆದವಳಂತೆ ಕೇಳಿದ್ದೆ. "ಎಷ್ಟು ಮೀಟರ್ಸ್ ಅಂದ್ರೆ ಒಂದು ಫರ್ಲಾಂಗ್ ಎಂದು ?"ಗೆಳತಿಯರು ನಾನು ಸೀರಿಯಸ್ ಆಗಿ ಕೇಳಿದ್ದ ಪ್ರಶ್ನೆಗೆ ತಲೆ ಕೆಡಿಸಿಕೊಂಡಿದ್ದರು. ಕೊನೆಗೆ ಸೀನಿಯರ್ ಪ್ರಿಯಾಂಕ ಅವಳಮ್ಮನಿಗೆ ಕಾಲ್ ಮಾಡಿ ಕೇಳಿದ್ದಳು ಅವರು maths teacher ಕೊನೆಗೂ ಉತ್ತರ ಸಿಕ್ಕಿಬಿಟ್ಟಿತ್ತು 200 mts ಎಂದು .! ಮನದಲ್ಲೊಂದು ಆಲೋಚನೆ ತಳವೂರಿತ್ತು . Empire mall stopನಲ್ಲಿ ಇಳಿದು ನೇರ ನನ್ನ hostelಗೆ ಬರುವವರೆಗೆ ಯೋಚನೆ ಸರಿಯಾದ ರೂಪ ತಳೆದಿತ್ತು . ಕಾರ್ಯರೂಪಕ್ಕೆ ಬರುವುದೊಂದು ಬಾಕಿ.
ಶನಿವಾರ ಮಧ್ಯಾಹ್ನ 1.30 ರ class ಮುಗಿಸಿ, ಊಟ ಮಾಡಿ ಸರಸರನೆ ಹೊರಬಂದಿದ್ದೆ ಕಾಲೇಜಿನ campusನಿಂದ ಯಾರಿಗೂ ಹೇಳದೆ. ಮನದಲ್ಲಿ ಚಿಕ್ಕಮ್ಮ ಹೇಳಿದ ವಿಷಯ ಕೊರೆಯುತ್ತಿತ್ತು. ಅವರು ಅಂದಿದ್ದಿಷ್ಟು"ನಿಂಗಳ ಕಾಲೇಜ್ ಹತ್ರ ಒಂದು ಫರ್ಲಾಂಗ್ ದೂರದಲ್ಲಿ ಅಕ್ಕ(ನನ್ನ ಅಮ್ಮ )ನ classmate ಹೇಮಂತನ ಮನೆ ಇದ್ದಡ, ಮೊನ್ನೆ ಟ್ರೈನ್ನಲ್ಲಿ ಬರಕದ್ರೆ ಸಿಕ್ಕಿದಿದ ನಿನ್ ಬಗ್ಗೆ ಹೇಳದೆ ಒಂದ್ಸಲ ಸಿಕ್ಕಿಕ್ಕೆ ಹೊಪುಲೇ ಹೇಳಿದ್ದ !".ಆಗ "ನೋಡ್ವ" ಎಂದು ಹೇಳಿದ್ದ ನಾನು ಇಂದು ಹೊರಟು ನಿಂತಿದ್ದೆ.ಅವರ ಮನೆ ಹೆಸರು ವಿಳಾಸ ತಿಳಿಯದೆ. ಕಾರಣ ಇಷ್ಟೇ ಅವರು ಕಾಲೇಜಿನ ದಿನಗಳಲ್ಲಿ ನನ್ನ ಅಮ್ಮನನ್ನು ತುಂಬಾ ಇಷ್ಟಪಡ್ತಿದ್ದರಂತೆ.ಆದ್ರೆ ಅಮ್ಮ ಒಪ್ಪಿರಲಿಲ್ಲ . ಒಂದು ಹಳೆಯ crush ಕಥೆಯ ಹುಡುಕಿ ಹೊರಟು ನಿಂತಿದ್ದೆ.
ಮಧ್ಯಾಹ್ನ ಎರಡು ಗಂಟೆ ಇರಬಹುದು ಹಾಗೆ ನಡೆಯುತ್ತಿದ್ದೆ . ಎಲ್ಲರ ಮನೆಯಲ್ಲೂ ಬಾಗಿಲು ಹಾಕಿತ್ತು. ಊಟದ ಹೊತ್ತು, ಊಟ ಆದವರದ್ದು ಮಲಗೋ ಹೊತ್ತು . (ಶನಿವಾರ ಧಾರಾವಾಹಿಯ ಕಾಟ ಇರಲಿಲ್ಲ). ಒಂದು ಗೂಡಂಗಡಿಯ ಅಜ್ಜನ ಹತ್ರ "ಅಜ್ಜ ಇಲ್ಲಿ ಹೇಮಂತ ಅನ್ನೋರ ಮನೆ ಎಲ್ಲಿದೆ ? ಅವ್ರು ಕಾಲೇಜ್ lecturer" ಎಂದೆ ."ಯಂಕ ಗೊತ್ತಿಜ್ಜಿ ಮಗಾ" ಅಂದ . ಹಾಗೆ ಮುಂದೆ ನಡೆದೆ. ಅಲ್ಲೇ ಒಂದು ಮನೆಯಲ್ಲಿ ಹೆಂಗಸೊಬ್ಬಳು ನಾಯಿಗೆ ಅನ್ನ ಹಾಕಲು ಹೊರಗೆ ಬಂದಿದ್ದಳು. ಒಮ್ಮೆ ನಗು ಹಾಯಿಸಿ ಇಲ್ಲಿ ಹೇಮಂತ್ ಅನ್ನೋರ ಮನೆ ಎಲ್ಲಿದೆ ? ಅವ್ರು ಕಾಲೇಜ್ lecturer ಎಂದೆ ಅದೇ ಹಾಡು ಇನ್ನೊಮ್ಮೆ ಹಾಡಿದೆ. ಅವ್ರು next crossನಲ್ಲಿ ಇದೆ ಅಂದರು.ಓಡುತ್ತಲೇ ನಡೆದಿದ್ದೆ ಅತ್ತ "thanks ಆಂಟೀ " ಎನ್ನುತ್ತಾ .
ಸುಂದರವಾದ ಪುಟ್ಟ ಮನೆ. ಮನೆಯೊಡತಿಯ ಆರೈಕೆಯಲ್ಲಿ ಬೆಳೆದು ನಿಂತ ಚಂದದ ಹೂದೋಟ. ಮನೆಯ ಜಗುಲಿಯಲ್ಲೊಂದು ಪರ್ಷಿಯನ್ ಬೆಕ್ಕು ಕುಳಿತಿತ್ತು. ಅಂಜಿಕೆಯಲ್ಲೇ calling bell ಒತ್ತಿದೆ. ಸುಮಾರು ಮಧ್ಯ ವಯಸ್ಸಿನ ಮಹಿಳೆಯೊಬ್ಬರು ಬಾಗಿಲು ತೆರೆದರು. ನನ್ನ ಪರಿಚಯ ಹೇಳಿಕೊಂಡೆ, sir ಇಲ್ವಾ ?ಎಂದು ಕೇಳಿದೆ. "ಒಂದು ನಿಮಿಷ " ಎಂದು ಒಳಗೆ ಹೋದವರು ಪುನಃ ಬಂದು ಬಾ ಕೂತ್ಕೋ ಅಂದ್ರು ."ಅವರು ಇನ್ನು ಬಂದಿಲ್ಲ ಫೋನ್ ಮಾಡಿದ್ದೆ ಈಗ ಹೊರ್ಟಿದಾರಂತೆ" ಅಂದ್ರು . ಬೇಡ ಎಂದರೂ ಕೇಳದೆ ಲಿಂಬು ಪಾನಕ ಮಾಡಿ ತಂದು ಕೊಟ್ಟರು. ಅದು ಇದು ಮಾತಾಡ್ತಾ ಇರೋವಾಗಲೇ ಸುಮಾರು ಆರು ಅಡಿ ಎತ್ತರದ, ಎಣ್ಣೆಗೆಂಪಿನ, ಫ್ರೆಂಚ್ ಗಡ್ಡದ ವ್ಯಕ್ತಿಯೊಬ್ಬರ ಆಗಮನವಾಯ್ತು . 'in simple words tall dark and handsome' ಎಂದು ಹೇಳಬಹುದು. ಎದ್ದು ನಿಂತು ಕೈ ಜೋಡಿಸಿದ್ದೆ "ನೀನು ವಿಜು ಮಗಳಲ್ವಾ? ತುಂಬಾ ಉದ್ದ ಇದ್ದೀಯ ,ಅವಳದ್ದೇ ಹೋಲಿಕೆ." ಎಂದರು ಮುಖದ ತುಂಬಾ ನಗು ಹರಡಿಕೊಂಡು. "ಕೂತ್ಕೋ ಡ್ರೆಸ್ ಚೇಂಜ್ ಮಾಡಿ ಬರ್ತೇನೆ " ಎಂದು ರೂಮಿಗೆ ಹೋಗ್ತಾ "ಜಾನೂ ಅವಳಿಗೆ ಊಟ ಆಗಿದ್ಯಾ ಕೇಳು " ಎಂದು ಹೆಂಡತೀನ ಕೇಳಿದಾಗ, ನಾನು ತುಂಟ ನಗೆ ನಕ್ಕಿದ್ದೆ . ಒಂದೈದು ನಿಮಿಷದಲ್ಲಿ ಮುಖ ತೊಳೆದು ಫ್ರೆಶ್ ಆಗಿ ಬಂದಿದ್ದರು .ಅಮ್ಮನ ಬಗ್ಗೆ, ಪಪ್ಪಾ,ತಮ್ಮನ ಬಗ್ಗೆ , ಎಲ್ಲ ಕೇಳಿದ್ರು . ಅವರ ಮಕ್ಕಳ ಬಗ್ಗೆ ಹೇಳಿದ್ರು. ನನ್ನ ಹವ್ಯಾಸ , boy friend ಇದಾನ ಎಂದು ಕೇಳ್ತಾ ಕೆಲವೇ ನಿಮಿಷಗಳಲ್ಲಿ ತುಂಬಾ ಆತ್ಮೀಯರೆನಿಸಿ ಬಿಟ್ರು. ಪೂರ್ವ ತಯಾರಿಯೊಂದಿಗೆ ಹೋಗಿದ್ದ ನಾನು ಆಲ್ಬಮ್ ಒಂದನ್ನು ಜೊತೆಗೆ ಒಯ್ದಿದ್ದೆ . ಎಲ್ಲರ ಫೋಟೋ ತೋರಿಸಿದ್ದೆ .ಅದರಲ್ಲೊಂದು ನನ್ನಮ್ಮನ ಹಳೆ ಫೋಟೋ ಅದರ ಪಕ್ಕದಲ್ಲೇ ಈಗಿನ ಫೋಟೋ ಕೂಡ ಕೂತಿತ್ತು ಮುಗುಮ್ಮಾಗಿ. "ಓಹ್! ಹಾಗೆ ಇದ್ದಾಳೆ almost. ಸ್ವಲ್ಪ ದಪ್ಪ ಅನ್ನೋದು ಬಿಟ್ರೆ "ಎಂದರು .comment or compliment ಅಂತ ಅರ್ಥ ಆಗದೆ ನಕ್ಕಿದ್ದೆ . ಪಪ್ಪನ ಹಳೆಯ ಫೋಟೋ ಹತ್ರ "ಓಹ್ ! ಪ್ರಭಾಕರ್ ಥರ ಕಾಣ್ತಾರೆ .!"ತಮ್ಮನ ಫೋಟೋಗೆ "ಸಕತ್ handsome ಎಷ್ಟು ಜನ ಹುಡುಗೀರು ಹಿಂದೆ ಬಿದ್ದಿದ್ದಾರೆ ?" ಅಂತ ನಕ್ಕರು . ಹಾಗೆ ಅವರ ಆಲ್ಬಮ್ ತೋರಿಸ್ತಾ ಮಾತಾಡ್ತಾ ಇರೋ ನಮಗೆ ಸಮಯ ಹೋದದ್ದೇ ತಿಳಿಯಲಿಲ್ಲ . ಇದೆಲ್ಲದರ ನಡುವೆ ಅವರನ್ನು sir ಎಂದು ಸಂಬೋಧಿಸುತ್ತಿದ್ದ ನನಗೆ "just uncle ಅನ್ನಮ್ಮ "ಸಾಕು ಅಂದಿದ್ದರು. uncle ನಾನಿನ್ನು ಹೊರಡ್ತೇನೆ ನಾಳೆ assignment ಬೇರೆ submit ಮಾಡ್ಬೇಕು ಎಂದು ಎದ್ದು ನಿಂತೆ. ಇರು ನಾನು ಬಿಡ್ತೇನೆ bustand ವರೆಗೆ ಎಂದು ನನ್ನ ಹಿಂದೆ ಬಂದರು. ಆಂಟೀಗೆ bye ಹೇಳಿ ನಾನು ಬೈಕ್ ಏರಿದ್ದೆ. ಹಾಗೆ ಹೋಗ್ತಾ "ನನ್ನವಳ ಹೆಸರು 'ಜಾನಕಿ'" ಅಂದ್ರು. ಅದೇನೋ ನೆನಪಾದವರಂತೆ. "ಕಾಲೇಜಿನ ದಿನಗಳಲ್ಲಿ ನಿನ್ನ ಅಮ್ಮನ್ನ ತುಂಬಾ ಇಷ್ಟ ಪಡ್ತಿದ್ದೆ, ಇವತ್ತು ನಂಗೆ ಕಾಲೇಜ್ daysಗೆ ಹೋದಂಗೆ ಆಯ್ತು ಅಂದ್ರು . bustandನಲ್ಲಿ ನನ್ನನ್ನು ಬಿಡುತ್ತಿದ್ದಂತೆ ದೂರದಲ್ಲಿ ಬಸ್ ಬರ್ತಾ ಇತ್ತು. ನಾನು "uncle ಫ್ರೆಂಚ್ ಗಡ್ಡ ಆವಾಗ್ಲೂ ಇತ್ತಾ? " ಇಲ್ಲಮ್ಮ ಅಂದ್ರು. ಆಗ ನಾನು "ಚೆನ್ನಾಗಿ ಕಾಣತ್ತೆ ನಿಮಗೆ ಆಗ ಇದ್ದಿದ್ರೆ ನನ್ನಮ್ಮ ನಿಮ್ಮನ್ನೇ ಒಪ್ಪಿಕೊಳ್ತಾ ಇದ್ರು " ಎಂದು ಹೇಳಿ ಕಣ್ಣು ಹೊಡೆದು ನಗುತ್ತ ಬಸ್ ಏರಿದ್ದೆ. ಅವರು ತಲೆ ಕೊಡವಿಕೊಂಡು ನಗುತ್ತಿದ್ದದ್ದು ಕನ್ನಡಿಯಲ್ಲಿ ಕಾಣುತ್ತಿತ್ತು ..! ನನಗೋ ಚಂದಿರನ ಅಂಗಳದಲ್ಲಿ ನಡೆದಾಡಿದ ಅನುಭವ. !!

9 comments:

  1. haa. quite funny, but it happens in real life.

    ReplyDelete
  2. This comment has been removed by a blog administrator.

    ReplyDelete
  3. ha ha ha ..:P
    its like a movie's oneline story...
    u handled it vry well...!

    ReplyDelete
  4. Very nice ,
    Good writing , keep it up

    ReplyDelete
  5. ಒಹೋ.. ಈ ತರಹದ ಎಕ್ಸ್‌ಪ್ಲೊರೇಶನ್ ಮಾಡ್ತೀಯಾ?
    i just wonder what that gentle man with the french beard might hav thought whn u said ..."ಚೆನ್ನಾಗಿ ಕಾಣತ್ತೆ ನಿಮಗೆ ಆಗ ಇದ್ದಿದ್ರೆ ನನ್ನಮ್ಮ ನಿಮ್ಮನ್ನೇ ಒಪ್ಪಿಕೊಳ್ತಾ ಇದ್ರು " ;) ;) ;)

    ReplyDelete
  6. tili hassya mishrit lekhan.. humm mast ada ri

    ReplyDelete
  7. ಸೌಮ್ಯ ಅವರೆ, ನಿಮ್ಮ ,ಹುಚ್ಚು ಹುಡುಗಿಯ ಹತ್ತೆಂಟು ಪ್ರಶ್ನೆಗಳು, ನಿಜಕ್ಕೂ ಅಥ೯ಪೂಣ೯ವಾದ ಬ್ಲಾಗ್ ಬರೆಯುತಿದ್ದಿರಿ. ಯುವ ಮನಸುಗಳಿಗೆ ಮಾದರಿಯಾಗಿ ನಿಲ್ಲುವ ನಿಮ್ಮ ವಿಚಾರ ಲಹರಿಗಳು ಪ್ರತಿಯೊಬ್ಬ ಸಾಹಿತ್ಯಾಸಕ್ತರಿಗೆ ಇಷ್ಚವಾಗದೇ ಇರಲಾರದು. ನಾನೊಬ್ಬ ಸಾಹಿತ್ಯದ ಹುಚ್ಚು ಪ್ರೇಮಿಯಾಗಿ, ಒಂದಿಷ್ಟು ಕಥೆ, ಕವನಗಳು, ಲೇಖನಗಳು, ಕಾದಂಬರಿ, ಚುಟುಕುಗಳು ಬರೆಯುವ ಆಸಕ್ತಿಯಿಂದ ಐದು ಪುಸ್ತಕಗಳು ಪ್ರಕಟಿಸಿದ್ದೇನೆಂದರೆ ನನಗೆ ನಾನೇ ನಂಬೋಕಾಗ್ತಿಲ್ಲ. ನಿಮ್ಮಂಥ ಸಾಹಿತ್ಯಾಸಕ್ತರು ರಚಿಸುವ ಬ್ಲಾಗ್ ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುವೆ. ಸಾಹಿತ್ಯವೆಂಬ ಸಮುದ್ರದಲ್ಲಿ ಈಜಾಡುವವರಿಗೆ ಈ ಲೋಕ ವಿಭಿನ್ನವಾಗಿ ಕಾಣುತ್ತದೆ ಎಂಬುದಕ್ಕೆ ನಿಮ್ಮ ಬ್ಲಾಗ್ ನೋಡಿದವರಿಗೆ ಗೊತ್ತಾಗುತ್ತದೆ. ಇನ್ನೂ ಹೆಚ್ಚು ಹೆಚ್ಚು ಬರೆಯುತಿರಿ. ನಿಮ್ಮ ಈ ಸಾಧನೆಗೆ ಯಶಸ್ಸು ಖಂಡಿತ. ಬೆಸ್ಟ ಆಫ್ ಲಕ್ ಸೌಮ್ಯ. ನಿಮ್ಮ ಬ್ಲಾಗ್ ನೋಡುವುದಕ್ಕೆ ನಿರಾಳ ಮನಸು, ಒತ್ತಡಗಳಿಲ್ಲದ ಸಮಯದಲ್ಲಿ ನೋಡಿ ಖುಷಿ ಪಡುವಂಥದ್ದು. ನಿತ್ಯವೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. www.kavikalavidaru.blogspot.com

    ವಂದನೆಗಳೊಂದಿಗೆ,

    ವೀರಣ್ಣ ಮಂಠಾಳಕರ್, ಬಸವಕಲ್ಯಾಣ

    ReplyDelete